ಹಣಕಾಸಿನ ಶಿಕ್ಷಣ - ಆರ್‌ಬಿಐ - Reserve Bank of India
RbiSearchHeader
Type of Document:
Function:
Department:
Search by Keyword:
Year:
Month:
From Date:
To Date:
Format:
Trending Searches
Past Searches
Useful Links
ಹಣಕಾಸಿನ ಶಿಕ್ಷಣ
ಮೇಲ್ನೋಟ
ಭಾರತೀಯ ರಿಸರ್ವ್ ಬ್ಯಾಂಕ್‌ನ ಅಭಿವೃದ್ಧಿ ಪಾತ್ರದಲ್ಲಿ ಹಣಕಾಸು ಸೇರ್ಪಡೆ ಮತ್ತು ಶಿಕ್ಷಣವು ಎರಡು ಪ್ರಮುಖ ಅಂಶಗಳಾಗಿವೆ. ಈ ನಿಟ್ಟಿನಲ್ಲಿ ವಿಮರ್ಶಾತ್ಮಕ ಸಾಹಿತ್ಯವನ್ನು ರಚಿಸಿ ಬ್ಯಾಂಕ್‌ಗಳು ಮತ್ತು ಇತರ ಹಿತಾಸಕ್ತರಿಗೆ ಡೌನ್‌ಲೋಡ್ ಮಾಡಲು ಮತ್ತು ಬಳಸಲು ಅದರ ವೆಬ್‌ಸೈಟ್‌ನಲ್ಲಿ 13 ಭಾಷೆಗಳಲ್ಲಿ ಅಪ್ಲೋಡ್ ಮಾಡಿದೆ.ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಉತ್ತಮ ಆರ್ಥಿಕ ಅಭ್ಯಾಸಗಳು, ಡಿಜಿಟಲ್ ಅಳವಡಿಕೆ ಮತ್ತು ಗ್ರಾಹಕರ ರಕ್ಷಣೆ ಈ ಉಪಕ್ರಮದ ಉದ್ದೇಶವಾಗಿದೆ.
ಹಣಕಾಸಿನ ಸಾಕ್ಷರತಾ ಸಪ್ತಾಹವು, ಕೇಂದ್ರೀಕೃತ ಅಭಿಯಾನದ ಮೂಲಕ ಪ್ರತಿ ವರ್ಷ ಪ್ರಮುಖ ವಿಷಯಗಳ ಮೇಲೆ ಜಾಗೃತಿಯನ್ನು ಉತ್ತೇಜಿಸಲು ಆರ್‌ಬಿಐನ ಉಪಕ್ರಮವಾಗಿದೆ.
ಹಣಕಾಸಿನ ಸಾಕ್ಷರತಾ ಸಪ್ತಾಹ 2023 ನ್ನು ಫೆಬ್ರವರಿ 13-17, 2023 ರಿಂದ "ಉತ್ತಮ ಆರ್ಥಿಕ ನಡವಳಿಕೆ - ನಿಮ್ಮ ಸಂರಕ್ಷಕ" ಥೀಮ್ ಮೇಲೆ ಆಚರಿಸಲಾಗುತ್ತದೆ. ಈ ವಾರದಲ್ಲಿ ಎ) ಉಳಿತಾಯ, ಯೋಜನೆ ಮತ್ತು ಬಜೆಟ್ (ಪೋಸ್ಟರ್) (ಕರಪತ್ರ) (ವೀಡಿಯೊ) ಡಿಜಿಟಲ್ ಹಣಕಾಸು ಸೇವೆಗಳ ವಿವೇಕಯುತ ಬಳಕೆ (ಪೋಸ್ಟರ್ 1) (ಪೋಸ್ಟರ್ 2) (ಕರಪತ್ರ 1) (ಕರಪತ್ರ 2) (ವೀಡಿಯೊ 1) (ವೀಡಿಯೊ 2) ಕೇಂದ್ರೀಕರಿಸಿ ಸಂದೇಶಗಳು ಪ್ರಸಾರವಾಗುತ್ತವೆ. “ಹಣಕಾಸಿನ ಸಾಕ್ಷರತಾ ಸಪ್ತಾಹ 2023” ಶೀರ್ಷಿಕೆಯ ಅಡಿಯಲ್ಲಿ 'ಡೌನ್‌ಲೋಡ್‌ಗಳು' ಟ್ಯಾಬ್ನಲ್ಲಿ ಪ್ರಚಾರದ ವಿಷಯವನ್ನು ಅಪ್‌ಲೋಡ್ ಮಾಡಲಾಗಿದೆ.
ಡಿಜಿಟಲ್ ಹಣಕಾಸು ಸೇವೆಗಳ ವಿವೇಚನೆಯ ಬಳಕೆ - I
ಡಿಜಿಟಲ್ ಹಣಕಾಸು ಸೇವೆಗಳ ವಿವೇಚನೆಯ ಬಳಕೆ - II
ಉಳಿತಾಯ, ಯೋಜನೆ ಮತ್ತು ಬಜೆಟ್ ಮಾಡುವುದು
ಹಣಕಾಸಿನ ಜಾಗೃತಿ ಸಂದೇಶಗಳು (ಫೇಮ್)
ಭಾರತೀಯ ರಿಸರ್ವ್ ಬ್ಯಾಂಕ್ ಫೇಮ್ (ಹಣಕಾಸಿನ ಜಾಗೃತಿ ಸಂದೇಶಗಳು) ನ ಮೂರನೇ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದು ಸಾಮಾನ್ಯ ಜನರ ಮಾಹಿತಿಗಾಗಿ ಮೂಲಭೂತ ಆರ್ಥಿಕ ಸಾಕ್ಷರತೆಯ ಸಂದೇಶಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ಕಿರುಪುಸ್ತಕ. ಕಿರುಪುಸ್ತಕವು ಇಪ್ಪತ್ತು ಸಂಸ್ಥೆ/ಉತ್ಪನ್ನ ತಟಸ್ಥ ಆರ್ಥಿಕ ಅರಿವಿನ ಸಂದೇಶಗಳನ್ನು ಒಳಗೊಂಡಿದ್ದು, ಹಣಕಾಸಿನ ಸಾಮರ್ಥ್ಯ,ಮೂಲ ಬ್ಯಾಂಕಿಂಗ್, ಡಿಜಿಟಲ್ ಹಣಕಾಸು ಸಾಕ್ಷರತೆ ಮತ್ತು ಗ್ರಾಹಕರ ರಕ್ಷಣೆ ಈ ನಾಲ್ಕು ವಿಷಯಗಳಲ್ಲಿ ಸಂಬಂಧಿತ ಸಂದೇಶಗಳನ್ನು ಪ್ರಚಾರ ಮಾಡುತ್ತದೆ.